Wednesday 9 September 2009

ಮುನ್ನುಡಿ

ಈ ತಾಣದ ಉದ್ದೇಶ, ಕನ್ನಡದ ಹೆಸರುಗಳನ್ನ ಪಟ್ಟಿ ಮಾಡಿ ಹೆಸರುವಾಸಿ ಮಾಡುವುದು. ಹಿಂದೆ ಹೆಚ್ಚಾಗಿ ಕನ್ನಡದ ಹೆಸರುಗಳನ್ನೇ ಆಯ್ಕೆ ಮಾಡುತಿದ್ದ ನಮ್ಮ ಕನ್ನಡಿಗರು ಇತೀಚೆಗೆ ಕನ್ನಡದಿಂದ ದೂರ ಹೋಗುತಿದ್ದಾರೆ. ಇಂದು ಸುಮಾರು ೯೫% ರಷ್ಟು ಕನ್ನಡಿಗರ ಹೆಸರುಗಳು ಮೂಲತಹ ಕನ್ನಡದ್ದಲ್ಲ. ನಮ್ಮತನವನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ ಈ ತಾಣ. ಕನ್ನಡಿಗರು ಕನ್ನಡ ಅಥವಾ ಕನ್ನಡಮಯವಾದ ಹೆಸರುಗಳನ್ನ ಆಯ್ಕೆ ಮಾಡುವುದರಲ್ಲಿ ಮುಜುಗರ, ಕೀಳರಿಮೆ ಇರಬಾರದು ಎನ್ನುವುದು ನಮ್ಮ ಅನಿಸಿಕೆ.

ಈ ಕೆಳಕಂಡ ಹೆಸರುಗಳಲ್ಲಿ ಕೆಲವು ತಪ್ಪುಗಳು ಕಾಣಬಹುದು, ಇದ್ದಲ್ಲಿ ದಯಮಾಡಿ ತಿಳಿಸತಕ್ಕದ್ದು. ನಿಮಗೆ ಗೊತ್ತಿರುವ ಕನ್ನಡದ ಹೆಸರುಗಳನ್ನ ಸಹ ನಮಗೆ ತಿಳಿಸಿ, ಈ ಪಟ್ಟಿಗೆ ಸೇರಿಸೋಣ.

Wednesday 27 May 2009

ಹುಡುಗರ ಹೆಸರು

ಅರಸ, ಅಪ್ಪಿ, ಅಯ್ಯು, ಅಯ್ಯ, ಆಗಸ, ಅಳಗಿರಿ


ಇನಿಯ, ಈರ


ಒಡೆಯ


ಕಣ, ಕಬ್ಬಿಗ (ಕವಿ), ಕರಿಯ (krishna), ಕದಿರ್ (ಕದಿರು, ಕಿರಣ, ಬೆಳಕು), ಕಂಪು, ಕಿಟ್ಟಿ, ಕಿಚ್ಚ, ಕೆಂಚ, ಕೆಂಪ


ಚಾಮ, ಚೆಲುವ, ಚೆನ್ನ, ಚೆನ್ನಿಗ, ಚನ್ನೀಲ (suneela)

ಜವರ, ಜಾಣೇಶ

ಗುಂಡ


ತಣ್ಗದಿರ (ಚಂದ್ರ), ತಣಿಯ (ಶಾಂತಿ ತೃಪ್ತಿ ಇರುವವನು), ತನಿ (ತನಿಯ, ಸಮೃದ್ಧ, ಸವಿಯಾದ), ತರವ (ಯೋಗ್ಯನಾದ), ತಳುಪ (ಪ್ರಕಾಶ), ತಳಿರ (ತಳಿರು, ಚಿಗುರು), ತಿಮ್ಮ

ದೊರೆ, ದುಂಬಿ, ದುಂಡಿ, ದೊಡ್ಡ, ಧಡಿಯಪ್ಪ (ಸೇವುಣ ಅರಸ)

ನವಿಲು, ನವಿರು, ನಂಜ, ನಂಜುಂಡ, ನಲ್ವಿಗ (santhosh), ನೇಸರ, ನನ್ಯದೇವ/ನನ್ನೀಯ (ನೇಪಾಳಾವನ್ನ ಆಳಿದ ಕನ್ನಡಿಗ ರಾಜ)


ಬಲ್ಲಾಳ, ಬಾನು, ಬಿಜ್ಜಳ (ಚಾಲುಕ್ಯ ಅರಸ - ಬಸವಣ್ಣನ ಕಾಲ), ಬೀರ, ಬಿಲ್ಲಮ (ಸೇವುಣ ಅರಸ)


ಪಂಜು (ಕೈಗೊಳ್ಳಿ, Torch), ಪುಂಜ (ಬೆಳಕು), ಪೊನ್ನ, ಪನ್ನೀರು, ಪುರುಡ (competitor), ಪೂಣ್ಮ (one who is determined), ಪುರುಳ್ (ಪುರುಳ, ನೀತಿವಂತ)

ಮಾಯ್ಕಾರ, ಮುಗಿಲು, ಮಲ್ಲ, ಮಂಜು, ಮುದ, ಮಾರ (ಮನ್ಮಥ), ಮಲ್ಲೇಶ, ಮಿಗಿಲ್, ಮುರಳಿ, ಮುನಿಯ, ಮರುಳ, ಮಕುಟ (ಕಿರೀಟ)

ರನ್ನ, ರಾಜುಗಿ (ಸೇವುಣ ಅರಸ)


ವಾದುಗಿ (ಸೇವುಣ ಅರಸ), ವೆಸುಗಿ (ಸೇವುಣ ಅರಸ)

ಸಂತಸ, ಸಿರಿಯ, ಸಿರಿಯಾಳ, ಸೋಜಿಗ


ಹಮ್ಮೀರ, ಹುಲಿಯ, ಹೊನ್ನ, ಹಂಪ, ಹಂಪನ, ಹಂಪಣ್ಣ

ಜಟಿಗ, ಅಮ್ಮಲ್ಲ, ವಪ್ಪುವಣ, ಗೊಗ್ಗಿ, ವಜ್ಜಡ, ಅಪ್ಪಯ್ಯ, ಅಜ್ಜಪ್ಪ, ಮಾತೈಯ್ಯ, ಪಿಟ್ಟಮ, ಅಜ್ಜಿಗ, ಸೋವಣ, ಕುಪ್ಪದೇವ.


ಹುಡುಗಿಯರ ಹೆಸರು

ಅರಸಿಅರಿಲು (Star)ಅರಗಿಣಿ, ಅಚಲ, ಅಚ್ಚ, ಅರ್ತಿ (ಒಲವು), ಅಮ್ಮಣ್ಣಿ


ಇಂಚರ, ಇಂಪನ, ಇಬ್ಬನಿ


ಐಸಿರಿ


ಒಲವು, ಒಲುಮೆ


ಕಾರಂಜಿ, ಕಂಪನ, ಕಂಕಣ, ಕಣ್ಮಣಿ, ಕವನ, ಕಸ್ತೂರಿ, ಕನಸು, ಕಿನ್ನರಿ, ಕೋಕಿಲ, ಕೋಗಿಲೆ, ಕೆಂಚಿ


ಗುಬ್ಬಿ, ಗಹನ, ಗೊರವಂಕ (Starling, Maina)


ಚೆಲ್ವಿ, ಚಿತ್ತ, ಚಿತ್ತಾರ, ಚೈತ್ರ, ಚಿತ್ತಾಳ, ಚಿಲುಮೆ, ಚಿನ್ನ, ಚಂಚಲ, ಚಿಗುರು, ಚುಕ್ಕಿ, ಚೆನ್ನಿ, ಚಿಂತನ


ಜಾಜಿ


ತನಿ, ತನ್ವಿ, ತುಂಗಾ, ತಾವರೆ, ನವಿರು, ನಯ, ನಿಸರ್ಗ, ನಲುಮೆ, ನಂಜಿ, ನಿಂಗಿ, ನುಡಿ, ನೈದಿಲೆ, ನಲ್ವಿ, ನನ್ನೀ  + ಗ (ಅಕ್ಕರೆ, Integrity), ನೈಜ


ಪಂಡರೀ, ಪರಿಮಳಾ, ಪೂವೀ, ಪ್ರಮಿಳಾ


ಬೊಂಬೆ, ಬೆರಗು, ಬೆಸುಗೆ, ಬಂಗಾರಿ, ಬೆಡಗಿ, ಭುವಿ, ಬೆಳ್ಳಿ

ಮಲ್ಲಿ, ಮಂಜರಿ, ಮಂಜು, ಮಂಜುಳ, ಮಂದಾರ, ಮಿಂಚು, ಮಿಂಚುಳ್ಳಿ, ಮಂದಾನಿಲ (Breeze, Breath), ಮಿನುಗು, ಮೈಸಿರಿ, ಮುಸುಕು, ಮುದ್ದು

ರವಳಿ

ಸೇವಂತಿ, ಸಿರಿ, ಸವಿ, ಸವಿತಾ, ಸಂಪಿಗೆ, ಸಾರ, ಸಿಂಗಾರಿ, ಸೋನೆ, ಸುಗ್ಗಿ, ಸುವ್ವಿ, ಸಿಂಚನ, ಸೊಗಸು, ಸೊಗಡು, ಸಿಹಿ, ಸುಬ್ಬಿ, ಸ್ಪಟಿಕ


ಶೈಲಾ, ಶರಾವತಿ


ಹನಿ, ಹಿರಿಮೆ, ಹಿಗ್ಗು, ಹಿಮ, ಹಾವ, ಹುರುಪು